| ಪ್ರೇಮವು ಬೇಡ ಪ್ರೇಯಸಿ ಬೇಡ, ನೆನಪೆ ಸಾಕೆನಗೆ... |
| ಆಸೆಯು ಬೇಡ ನಿರಾಸೆಯು ಬೇಡ, ಕನಸೆ ಸಾಕೆನಗೆ... |
| ಕಣ್ಣನು ನಂಬಿ ಹಾರುವ ದುಂಬಿ, ಮಾರುಹೋಗಬೇಡ ನೀನು ಕಾಗದದ ಹೂವಿಗೆ |
| ಪ್ರೇಮವು ಬೇಡ ಪ್ರೇಯಸಿ ಬೇಡ, ನೆನಪೆ ಸಾಕೆನಗೆ... |
| ನಿಜವೇ ನೀ ದೂರ... ನೀನ್ನ ಕಾಣಿಕೆ ಬಲು ಭಾರ... |
| ನಾನಿರುವೆ ನಿನಗೆ ದೂರ... ಈ ಭ್ರಮೆಗಳ ಆಸರೆ ಸಾಕೆನಗೆ... |
| ಬೆರೆಯುವ ಮಾತೇಕೆ... ಬೇರಾಗುವ ಗೋಜೇಕೆ... |
| ಜನ ನೋಡಿ ನಗುವುದೇಕೆ... ಕಹಿ ವಿಷಮಯ ಅನುಭವ ಸಾಕೆನಗೆ... |
| ಹೃದಯವೇ ಕಲ್ಲಾದರು... ಲೋಕವೇ ಮುಳ್ಳಾದರು... |
| ನಿಜದ ಬೆಂಕಿ ಮೇಲೆ ಇರುವೇ ನಾ... |
| ಪ್ರೇಮವು ಬೇಡ ಪ್ರೇಯಸಿ ಬೇಡ, ನೆನಪೆ ಸಾಕೆನಗೆ... |
| ನಂಜಿನ ಕಣ್ಣುಗಳು... ಕನ್ನಡಿಯ ರೀತಿಯಲ್ಲ... |
| ನಿಜವನ್ನೆ ನುಡಿವುದಿಲ್ಲ... ಅತಿ ಆತುರ ಮನಸಿನ ಕಡು ವೈರಿ... |
| ಮಂಜಿನ ಪರದೆಗಳು... ಸ್ಠಿರವಾಗಿ ಇರುವುದಿಲ್ಲ... |
| ಬೆಳಕನ್ನು ತಡೆವುದಿಲ್ಲ... ರವಿ ಬಂದರೆ ತೆರೆವುದು ತಾ ಜಾರಿ... |
| ಬದುಕಿದು... ಇರುವುದು... ನೆನೆಯಲು ನೆರವಾಗಲು... |
| ಪರರ ಹಿತದ ಮೇಲೆ ಇರುವೆ ನಾ... |
| ಪ್ರೇಮವು ಬೇಡ ಪ್ರೇಯಸಿ ಬೇಡ, ನೆನಪೆ ಸಾಕೆನಗೆ... |
| ಆಸೆಯು ಬೇಡ ನಿರಾಸೆಯು ಬೇಡ, ಕನಸೆ ಸಾಕೆನಗೆ... |
| ಕಣ್ಣನು ನಂಬಿ ಹಾರುವ ದುಂಬಿ, ಮಾರುಹೋಗಬೇಡ ನೀನು ಕಾಗದದ ಹೂವಿಗೆ |
| ಪ್ರೇಮವು ಬೇಡ ಪ್ರೇಯಸಿ ಬೇಡ, ನೆನಪೆ ಸಾಕೆನಗೆ... |
Thursday, 16 January 2014
ಪ್ರೇಮವು ಬೇಡ ಪ್ರೇಯಸಿ ಬೇಡ, ನೆನಪೆ ಸಾಕೆನಗೆ
Subscribe to:
Post Comments (Atom)
No comments:
Post a Comment