| ಅವನಲ್ಲಿ ಇವಳಿಲ್ಲಿ ಮಾತಿಲ್ಲ ಕಥೆಯಿಲ್ಲ |
| ಎದುರೆದುರು ಬಂದಾಗ ಹೆದರೆದರಿ ನಿಂತಾಗ |
| ಅಲ್ಲೇ ಆರಂಭ ಪ್ರೇಮ |2| |
| ನೋಡಿ ನೋಡಿ ಪ್ರೇಮವನು ಮಾಡೋದಲ್ಲ |
| ಮಾಡುತಲಿ ಹಾಡೋದಲ್ಲ |
| ಹಾಡಿನಲಿ ಹೇಳೋದಲ್ಲ ಹೇಳುವುದ ಕೇಳೋದಲ್ಲ |
| ಕೇಳುತಲಿ ಕಲಿಯೋದಲ್ಲ ಕಲಿತು ನೀ ಮಾಡೋದಲ್ಲ |
| ಮೌನವೇನೆ ಧ್ಯಾನವೇ ಪ್ರೇಮ "|ಅವನಲ್ಲಿ|" |
| ನೀನೆ ಎಲ್ಲ ನೀನಿರದೆ ಬಾಳೆ ಇಲ್ಲ |
| ಅನ್ನುವುದು ಪ್ರೇಮ ಅಲ್ಲ |
| ಮರಗಳನು ಸುತ್ತೋದಲ್ಲ ಕವನಗಳ ಗೀಚೋದಲ್ಲ |
| ನೆತ್ತರಲಿ ಬರೆಯೋದಲ್ಲ ವಿಷವನು ಕುಡಿಯೋದಲ್ಲ |
| ಮೌನವೇನೆ ಧ್ಯಾನವೇ ಪ್ರೇಮ…"|ಅವನಲ್ಲಿ|" |
No comments:
Post a Comment