Thursday 16 January 2014

ಪ್ರೇಮವು ಬೇಡ ಪ್ರೇಯಸಿ ಬೇಡ, ನೆನಪೆ ಸಾಕೆನಗೆ

ಪ್ರೇಮವು ಬೇಡ ಪ್ರೇಯಸಿ ಬೇಡ, ನೆನಪೆ ಸಾಕೆನಗೆ...
ಆಸೆಯು ಬೇಡ ನಿರಾಸೆಯು ಬೇಡ, ಕನಸೆ ಸಾಕೆನಗೆ...
ಕಣ್ಣನು ನಂಬಿ ಹಾರುವ ದುಂಬಿ, ಮಾರುಹೋಗಬೇಡ ನೀನು ಕಾಗದದ ಹೂವಿಗೆ
ಪ್ರೇಮವು ಬೇಡ ಪ್ರೇಯಸಿ ಬೇಡ, ನೆನಪೆ ಸಾಕೆನಗೆ...
ನಿಜವೇ ನೀ ದೂರ... ನೀನ್ನ ಕಾಣಿಕೆ ಬಲು ಭಾರ...
ನಾನಿರುವೆ ನಿನಗೆ ದೂರ... ಈ ಭ್ರಮೆಗಳ ಆಸರೆ ಸಾಕೆನಗೆ...
ಬೆರೆಯುವ ಮಾತೇಕೆ... ಬೇರಾಗುವ ಗೋಜೇಕೆ...
ಜನ ನೋಡಿ ನಗುವುದೇಕೆ... ಕಹಿ ವಿಷಮಯ ಅನುಭವ ಸಾಕೆನಗೆ...
ಹೃದಯವೇ ಕಲ್ಲಾದರು... ಲೋಕವೇ ಮುಳ್ಳಾದರು...
ನಿಜದ ಬೆಂಕಿ ಮೇಲೆ ಇರುವೇ ನಾ...
ಪ್ರೇಮವು ಬೇಡ ಪ್ರೇಯಸಿ ಬೇಡ, ನೆನಪೆ ಸಾಕೆನಗೆ...
ನಂಜಿನ ಕಣ್ಣುಗಳು... ಕನ್ನಡಿಯ ರೀತಿಯಲ್ಲ...
ನಿಜವನ್ನೆ ನುಡಿವುದಿಲ್ಲ... ಅತಿ ಆತುರ ಮನಸಿನ ಕಡು ವೈರಿ...
ಮಂಜಿನ ಪರದೆಗಳು... ಸ್ಠಿರವಾಗಿ ಇರುವುದಿಲ್ಲ...
ಬೆಳಕನ್ನು ತಡೆವುದಿಲ್ಲ... ರವಿ ಬಂದರೆ ತೆರೆವುದು ತಾ ಜಾರಿ...
ಬದುಕಿದು... ಇರುವುದು... ನೆನೆಯಲು ನೆರವಾಗಲು...
ಪರರ ಹಿತದ ಮೇಲೆ ಇರುವೆ ನಾ...
ಪ್ರೇಮವು ಬೇಡ ಪ್ರೇಯಸಿ ಬೇಡ, ನೆನಪೆ ಸಾಕೆನಗೆ...
ಆಸೆಯು ಬೇಡ ನಿರಾಸೆಯು ಬೇಡ, ಕನಸೆ ಸಾಕೆನಗೆ...
ಕಣ್ಣನು ನಂಬಿ ಹಾರುವ ದುಂಬಿ, ಮಾರುಹೋಗಬೇಡ ನೀನು ಕಾಗದದ ಹೂವಿಗೆ
ಪ್ರೇಮವು ಬೇಡ ಪ್ರೇಯಸಿ ಬೇಡ, ನೆನಪೆ ಸಾಕೆನಗೆ...

No comments:

Post a Comment