Thursday 16 January 2014

ಒಂದೆ ಉಸಿರಂತೆ ಇನ್ನು ನಾನು ನೀನು

ಹಾಡು ಹಾಡು ಒಂದು ಹಾಡು ಹಾಡು
 ಹಾಡದಿದ್ದರೆ ನನ್ನ ಹಾಡು ಕೇಳು
ಉಸಿರು ಕಟ್ಟಿ ಹಾಡುವೆ ಹಾಡು
ಉಸಿರು ನಿಂತರೇ ನಿನಗೆ ನಷ್ಟ ನೋಡು

ಒಂದೆ ಉಸಿರಂತೆ ಇನ್ನು ನಾನು ನೀನು
ನಾನು ನೀನು ಬೇರೆ ಏನು
ನೀನೆ ನಾನು ನಾನೆ ನೀನು
ಒಂದೆ ಕಡಲಂತೆ ಇನ್ನು ನಾನು ನೀನು
ತೀರ ಸಾಗರ ಬೇರೆ ಏನು
ಬೇರೆ ಅಂದರೆ ಅರ್ಥ ಏನು
 ಹಾಡೆ ಕೋಗಿಲೆ ಒಂದೇ ಉಸಿರಿನಲಿ ಚಂದಿರನನ್ನು ಚಂದಿರನೆನ್ನಲು ಅಂಜಿಕೆಯೇನು ಅಳುಕಿನ್ನೇನು
ಕೇಳೆ ಕೋಗಿಲೆ ನನ್ನಾ ಕೊರಳಿನಲ್ಲಿ ನಿನ್ನ ಹೆಸರೇ ಕೊನೆಯಾ ಮಾತು ಕೊನೆಯ ನಾದ ಕೊನೆಯ ವೇದ ಪ್ರೀತಿ ಪ್ರೀತಿ ಪ್ರೀತಿ ಪ್ರೀತಿ ಕೊಡುವೆ ನನ್ನ ಪ್ರಾಣ ಪ್ರೀತಿ

ಒಂದೆ ಉಸಿರಂತೆ ಇನ್ನು ನಾನು ನೀನು
ನಾನು ನೀನು ಅಲ್ಲ ಇನ್ನು
ನೀನೆ ನಾನು ನಾನೆ ನೀನು
ಎತ್ತಾ ಇತ್ತೋ ಎಂತು ಬಂತೋ ಕಾಣೆ ನಾನು
ಒಂದೆ ಧೈರ್ಯ ಒಂದೆ ಹುರುಪು
ಹಾಡೋ ಹಂಬಲ ತಂದೆ ನೀನು
ಕೋಟಿ ಕೋಗಿಲೆ ಒಂದೇ ಉಸಿರಿನಲಿ ಪ್ರೀತಿ ಮಾಡು ಪ್ರೀತಿಯ ಬೇಡು ಅಂದಿದೆ ಅಂದಿದೆ ಹಾಡಿದೆ ಹೆಣ್ಣೆದೆ

ಅಂತರಂಗದಾ ಸಹ್ಯಾದ್ರಿ ಮಾಡಿಲಲ್ಲಿ ನೂರು ನವಿಲಾಗಿ ಹೃದಯ ಹಾಡಿದೆ ಹಾಡಿದೆ ಕುಣಿದಿದೆ ಕುಣಿದಿದೆ ಕಾದಿದೆ ಕಾದಿದೆ ಪ್ರೀತಿ ನೀಡು ಒಂದೆ ಉಸಿರಲಿ ನಿಂತಿದೆ ನಿಂತಿದೆ

ಇಂದು ಪ್ರೀತಿಯು ಹಾಡಿದ ಪರ್ವ ದಿನ
ಅದ ಕೇಳಲು ದಕ್ಕಿದ ಪುಣ್ಯ ದಿನ
ಅದು ಬೆಳಕಂತೆ ಮುಟ್ಟಲಾಗದಂತೆ
ಬೆಳದಿಂಗಳಂತೆ ಅಪರಾಗದಂತೆ
ಗೆಳತಿ ಗೆಳತಿ ಪ್ರೀತಿಯ ಗೆಳತಿ
ನೀನೆ ನನ್ನೀ ಪ್ರೀತಿಯ ಒಡತಿ
ಬ್ರಹ್ಮ ಬಾರಿ ಜಾಣ ಜಾಣ ದಾರಿಲಿಟ್ಟ ಪ್ರೀತಿ ಪ್ರಾಣ
ನಾರಿ ನೀನೆ ಪ್ರೀತಿಯ ರೂಪ ನೀನೆ ತಾನೆ ಹೃದಯದ ದೀಪ
ಹೊತ್ತಿಕೊಂಡಿತ್ತಮ್ಮ ನಮ್ಮ ಪ್ರೀತಿ ಜ್ಯೋತಿ
ಗಾಳಿ ಅಲ್ಲ ಮಳೆಯು ಅಲ್ಲ
ಭೂಮಿ ಬಿರಿದರು ಆರೋದಿಲ್ಲ
ಒಂದೆ ದೀಪದಂತೆ ಇನ್ನು ನಾನು ನೀನು
ಎಣ್ಣೆ ದಾರ ಬೇರೆ ಏನು ಬೇರೆ ಅಂದರೆ ಅರ್ಥ ಏನು ಚಂದಮಾಮನೇ ನೋಡೋ ನಮ್ಮಿಬ್ಬರ ನೀನು ಕಂಡ ಪ್ರೇಮಿಗಳಲ್ಲಿ ನಮ್ಮನು ಸೇರಿಸು ಅವರಿಗು ಹೋಲಿಸು
 ಚಂದಮಾಮನೇ ಕೇಳೋ ನಮ್ಮಾಣೆಯಾ ನಮ್ಮಿಂದಂತು ಪ್ರೀತಿಗೆ ದ್ರೋಹ ಆಗದು ಆಗದು ಎಂದಿಗು ಆಗದು ಆಗುವುದಾದರೆ ಇಂದೇ ಆಗಲಿ ಆಗುವ ಮೊದಲೆ ಪ್ರಾಣ ಹೋಗಲಿ

ಚಂದನ ಚಂದನ ಕಂಪಿನ ಚಂದನ
ನಿನ್ನೀ ಉಸಿರಿನ ಕಸ್ತೂರಿ ಸಿಂಚನ
ಕಂಪನ ಕಂಪನ ಇಂಪಿನ ಕಂಪನ
ನಿನ್ನೀ ಮಾತಿನ ಅಮೃತ ಸಿಂಚನ
ಗಾಯನ ಗಾಯನ ನಿನ್ನೀ ಪ್ರೀತಿಯ ಜೀವನ ಚೇತನ
ಗಾಯನ ಗಾಯನ ಅಯನ ಅಯನ
ನಿನ್ನಾ ನೆರಳಲ್ಲಿ ನನ್ನೀ ಜನುಮದ ಪ್ರೇಮಾಯಣ
ನಡೆ ಕಲ್ಲಿರಲಿ ಕಲ್ಲು ಮುಳ್ಳಿರಲಿ ಕಲ್ಲಿರಲಿ ಕಲ್ಲು ಮುಳ್ಳಿರಲಿ
ನಡೆ ಮಳೆ ಇರಲಿ ನಡು ಬಿಸಿಲಿರಲಿ
ಪ್ರೇಮಾಯಣಕೆ ನಿನ್ನ ನೆರಳಿರಲಿ
ಜನುಮಾಯಣಕೆ ನಿನ್ನ ಕೊರಳಿರಲಿ
ಭಯವಿಲ್ಲ ಇನ್ನು ಭಯವಿಲ್ಲ
ನನ್ನ ನಿರ್ಧಾರ ಇನ್ನು ನನದಲ್ಲ
ನನ್ನಾ ಎದೆಯಲ್ಲೊಬ್ಬಾ ಚಂದ್ರ ಬೆಳ್ಳೀ ಬೆಳಕ ತಂದಾ ತಂದಾ ಪ್ರೀ
ತಿ ಅಂದರೇನು ಅಂದ ಕೇಳಿ ತಾನೆ ಉತ್ತರ ತಂದ
ಸ್ವಚ್ಚ ಬಿಳುಪಿನಂತೆ ಇನ್ನು ನಾನು ನೀನು
ಏಳು ಬಣ್ಣ ಸೇರಿ ಬಿಲ್ಲು ಆದ ಹಾಗೆ ನೀನು ನಾನು
ಒಂದೆ ಹಾಡಂತೆ ಇನ್ನು ನಾನು ನೀನು
ಎಲ್ಲಾ ಭಾವ ಕೂಡಿಕೊಂಡ ಬಾಳಿನಂತೆ ನಾನು ನೀನು
ಚಂದಮಾಮನೇ ನೋಡೋ ನಮ್ಮಿಬ್ಬರ ನೀನು ಕಂಡ ಪ್ರೇಮಿಗಳಲ್ಲಿ ನಮ್ಮನು ಸೇರಿಸು ಅವರಿಗು ಹೋಲಿಸು ಚಂದಮಾಮನೇ ಕೇಳೋ ನಮ್ಮಾಣೆಯಾ ನಮ್ಮಿಂದಂತು ಪ್ರೀತಿಗೆ ದ್ರೋಹ ಆಗದು ಆಗದು ಎಂದೂ ಆಗದು ಆಗುವುದಾದರೆ ಇಂದೇ ಆಗಲಿ ಆಗುವ ಮೊದಲೆ ಪ್ರಾಣ ಹೋಗಲಿ

ಒಂದೆ ಉಸಿರಂತೆ ಇನ್ನು ನಾನು ನೀನು
ನಾನು ನೀನು ಬೇರೆ ಏನು
ನೀನೆ ನಾನು ನಾನೆ ನೀನು
ಒಂದೆ ಕಡಲಂತೆ ಇನ್ನು ನಾನು ನೀನು
ತೀರ ಸಾಗರ ಬೇರೆ ಏನು
ಬೇರೆ ಅಂದರೆ ಅರ್ಥ ಏನು
 ಹಾಡೆ ಕೋಗಿಲೆ ಒಂದೇ ಉಸಿರಿನಲಿ ಚಂದಿರನನ್ನು ಚಂದಿರನೆನ್ನಲು ಅಂಜಿಕೆಯೇನು ಅಳುಕಿನ್ನೇನು
ಕೇಳೆ ಕೋಗಿಲೆ ನನ್ನಾ ಕೊರಳಿನಲ್ಲಿ ನಿನ್ನ ಹೆಸರೇ ಕೊನೆಯಾ ಮಾತು ಕೊನೆಯ ನಾದ ಕೊನೆಯ ವೇದ ಪ್ರೀತಿ ಪ್ರೀತಿ ಪ್ರೀತಿ ಪ್ರೀತಿ ಕೊಡುವೆ ನನ್ನ ಪ್ರಾಣ ಪ್ರೀತಿ

No comments:

Post a Comment